ದಿ ಕೇರಳ ಸ್ಟೋರಿ
Baca lagi
: The Kerala Story: ಭಾರಿ ಕೋಲಾಹಲಕ್ಕೆ ಕಾರಣವಾಗಿರುವ 'ದಿ ಕೇರಳ ಸ್ಟೋರಿ' ಚಿತ್ರ ವಿವಾದವೇನು ಗೊತ್ತೆ?
ADVERTISEMENT
What is The Kerala Story film Controversy:Explained
2. ಚಿತ್ರವು ಬಲವಂತದ ಧಾರ್ಮಿಕ ಮತಾಂತರದ ಸುತ್ತ ಕೇಂದ್ರೀಕೃತವಾಗಿದೆ. ಸಿನಿಮಾ ವರದಿಯ ಪ್ರಕಾರ ಕೇರಳದಲ್ಲಿ ಸರಿಸುಮಾರು 32,000 ಮಹಿಳೆಯರನ್ನು ಇಸ್ಲಾಂಗೆ ಮತಾಂತರಿಸಲಾಗಿದೆ. ಭಯೋತ್ಪಾದಕ ಗುಂಪು ಅನೇಕರನ್ನು ಐಸಿಸ್ ಆಳ್ವಿಕೆಯ ಸಿರಿಯಾಕ್ಕೆ ಕರೆದುಕೊಂಡು ಹೋಗಿದೆ ಎಂದು ಸಿನಿಮಾ ಟ್ರೈಲರ್ ಮತ್ತು ಟೀಸರ್‌ನಲ್ಲಿ ಹೇಳಲಾಗಿದೆ.
3. ಚಿತ್ರದ ಟ್ರೇಲರ್ ಬಿಡುಗಡೆಯಾದ ನಂತರ, "ಕೆಟ್ಟ ದ್ವೇಷಪೂರಿತ ಭಾಷಣ" ಮತ್ತು "ಆಡಿಯೋ- ವಿಡಿಯೋ ಪ್ರಾಪಗಾಂಡ" ಆಧಾರದ ಮೇಲೆ ಅದರ ಬಿಡುಗಡೆಗೆ ತಡೆಯಾಜ್ಞೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಯಿತು.
4. ಮಂಗಳವಾರ ಸುಪ್ರೀಂ ಕೋರ್ಟ್ ಮನವಿಯನ್ನು ಪರಿಗಣಿಸಲು ನಿರಾಕರಿಸಿದೆ. ಸುಪ್ರೀಂ ಕೋರ್ಟ್ ಪೀಠವು "ದ್ವೇಷದ ಭಾಷಣಗಳಲ್ಲಿ ವೈವಿಧ್ಯಗಳಿವೆ. ಈ ಚಿತ್ರವು ಸೆನ್ಸಾರ್ ಪ್ರಮಾಣಪತ್ರವನ್ನು ಪಡೆದುಕೊಂಡಿದೆ. ಜೊತೆಗೆ ಸೆನ್ಸಾರ್ ಮಂಡಳಿಯಿಂದ ಅನುಮತಿ ಪಡೆದಿದೆ" ಎಂದು ಹೇಳಿದೆ.
What is The Kerala Story film Controversy:Explained
5. "ಇದು ವ್ಯಕ್ತಿಯೊಬ್ಬರು ವೇದಿಕೆಯ ಮೇಲೆ ನಿಂತು ಭಾಷಣವನ್ನು ಪ್ರಾರಂಭಿಸುವಂತಲ್ಲ. ನೀವು ಚಲನಚಿತ್ರದ ಬಿಡುಗಡೆಗೆ ತಡೆ ಹಾಕಬೇಕಿದ್ದರೇ, ಅದಕ್ಕೆ ಸಾಕ್ಷಿ ಮತ್ತು ಸೂಕ್ತ ವೇದಿಕೆಯ ಮೂಲಕ ಚಾಲೆಂಜ್ ಮಾಡಬೇಕು" ಎಂದು ಸುಪ್ರೀಂ ಕೋರ್ಟ್ ಪೀಠ ತಿಳಿಸಿದೆ.
6. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಚಿತ್ರದ ನಿರ್ಮಾಪಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಸಿನಿಮಾ "ಸಂಘ ಪರಿವಾರದ ಸುಳ್ಳೂ ಕಾರ್ಖಾನೆಯ ಉತ್ಪನ್ನ" ಎಂದು ಆಕ್ರೋಶ ಹೊರಹಾಕಿದ್ದಾರೆ.
7. ಸಿನಿಮಾ ಟ್ರೇಲರ್‌ಗೆ ಬಂದ ಟೀಕೆಗಳ ನಂತರ, ಯೂಟ್ಯೂಬ್‌ನಲ್ಲಿ ಚಿತ್ರದ ಟೀಸರ್ ಆರಂಭದಲ್ಲಿ "ಕೇರಳದಲ್ಲಿ 32,000 ಹೆಣ್ಣುಮಕ್ಕಳ ಹೃದಯವಿದ್ರಾವಕ ಮತ್ತು ಕರುಳು ಹಿಂಡುವ ಕಥೆಗಳು..." ಎಂದು ಇದದ್ದು, ಈಗ "ಕೇರಳದ ಮೂವರು ಯುವತಿಯರ ನೈಜ ಕಥೆಗಳು" ಎಂದು ಬದಲಿಸಲಾಗಿದೆ.
image'ದಿ ಕೇರಳ ಸ್ಟೋರಿ' ವಿರುದ್ಧ ಕೇರಳ ಹೈಕೋರ್ಟ್‌ನಲ್ಲಿ ಪಿಐಎಲ್: ಮೇ 5ಕ್ಕೆ ವಿಚಾರಣೆ
8. ಕಾಂಗ್ರೆಸ್ ನಾಯಕ ಶಶಿ ತರೂರ್ ಕೂಡ ಸಿನಿಮಾ ಬಗ್ಗೆ ಕಿಡಿ ಕಾರಿದ್ದು, "ಚಿತ್ರದ ನಿರ್ಮಾಪಕರು ರಾಜ್ಯದ ವಾಸ್ತವತೆಯನ್ನು ಉತ್ಪ್ರೇಕ್ಷೆ ಮತ್ತು ವಿರೂಪ ಮಾಡಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
9. ಕೇರಳದಲ್ಲಿ 32,000 ಮಹಿಳೆಯರನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಿಸಲಾಗಿದೆ ಎಂದು ಸಾಬೀತುಪಡಿಸುವ ಯಾರಿಗಾದರೂ 1 ಕೋಟಿ ರೂಪಾಯಿ ನೀಡುವುದಾಗಿ ಕಾಂಗ್ರೆಸ್ ನಾಯಕ ಶಶಿ ತರೂರ್ ಸೋಮವಾರ ಟ್ವೀಟ್ ಮಾಡಿದ್ದಾರೆ.
ADVERTISEMENT
10. ಚಿತ್ರದ ನಿರ್ದೇಶಕ ಸುದೀಪ್ತೋ ಸೇನ್ ಮತ್ತು ನಿರ್ಮಾಪಕ ವಿಪುಲ್ ಅಮೃತಲಾಲ್ ಶಾ ಅವರು 'ದಿ ಕೇರಳ ಸ್ಟೋರಿ' ನೈಜ ಘಟನೆಗಳನ್ನು ಆಧರಿಸಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಇನ್ನಷ್ಟು KERALA ಸುದ್ದಿಗಳು
image
ಮಮತಾ ಬ್ಯಾನರ್ಜಿಗೆ 'ದಿ ಕೇರಳ ಸ್ಟೋರಿ' ನಿರ್ಮಾಪಕ ಕೈ ಮುಗಿದು ಮನವಿ ಮಾಡಿದ್ದು ಹೀಗೆ
image
'ದಿ ಕೇರಳ ಸ್ಟೋರಿ' ನಿಷೇಧ: ಪಶ್ಚಿಮ ಬಂಗಾಳ ಸರ್ಕಾರದ ನಿರ್ಧಾರಕ್ಕೆ ಸುಪ್ರೀಂ ಕೋರ್ಟ್ ತಡೆ
image
ಕೇರಳ-ಕರ್ನಾಟಕ ನಡುವೆ ರೈಲು; ಅಂತಿಮ ಸಮೀಕ್ಷೆಗೆ 5.90 ಕೋಟಿ ಬಿಡುಗಡೆ
ಕರ್ನಾಟಕದಲ್ಲಿ ಕಾಂಗ್ರೆಸ್ ತನ್ನ ಶಾಸಕರನ್ನು ಬಿಜೆಪಿಯಿಂದ ರಕ್ಷಿಸಬೇಕು ಎಂದ ಕೇರಳದ ಆಡಳಿತರೂಢ ಪಕ್ಷ
ಕರ್ನಾಟಕದಲ್ಲಿ 40% ಕಮಿಷನ್ ಇದ್ದರೆ, ಕೇರಳದಲ್ಲಿ 80%: ಕಾಂಗ್ರೆಸ್
ಈಗ ಡ್ರೋನ್ ಕಣ್ಗಾವಲು ಹೊಂದಿರುವ ದೇಶದ ಮೊದಲ ರಾಜ್ಯವಾಗಿ ಕೇರಳ
ದಿ ಕೇರಳ ಸ್ಟೋರಿ ಸಿನೆಮಾ ನೋಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸ್ಮೃತಿ ಇರಾನಿ
'ದಿ ಕೇರಳ ಸ್ಟೋರಿ' ನಿರ್ಮಾಪಕನನ್ನು ಗಲ್ಲಿಗೇರಿಸಬೇಕು; ಎನ್ಸಿಪಿ ನಾಯಕನ ವಿವಾದಾತ್ಮಕ ಹೇಳಿಕೆ