ಮಹಿಳೆಯರ "ಶಕ್ತಿ"ಗೆ ಮುರಿದುಬಿತ್ತು ಕೆಎಸ್ ಆರ್ ಟಿಸಿ ಬಸ್ ನ ಬಾಗಿಲು !!!!
続きを読む
:ಒಂದು ಪ್ರಕರಣದಲ್ಲಿ ಮಹಿಳೆಯರು ಉಚಿತ ಬಸ್ ಪ್ರಯಾಣಕ್ಕೆ ಅತಿ ಹೆಚ್ಚು ಸಂಖ್ಯೆಯಲ್ಲಿ ಧಾವಿಸಿ ಕೆಎಸ್ ಆರ್ ಟಿಸಿ ಬಸ್ ನ ಬಾಗಿಲು ಮುರಿದುಬಿದ್ದಿದೆ.
ಕೆಲವೆಡೆ ಸಂಭಾವ್ಯ ಅನಾಹುತಗಳು ತಪ್ಪಿವೆ. ಇಂಥದ್ದೇ ಒಂದು ಪ್ರಕರಣದಲ್ಲಿ ಮಹಿಳೆಯರು ಉಚಿತ ಬಸ್ ಪ್ರಯಾಣಕ್ಕೆ ಅತಿ ಹೆಚ್ಚು ಸಂಖ್ಯೆಯಲ್ಲಿ ಧಾವಿಸಿ ಕೆಎಸ್ ಆರ್ ಟಿಸಿ ಬಸ್ ನ ಬಾಗಿಲು ಮುರಿದುಬಿದ್ದಿದೆ.
ಕೊಳ್ಳೇಗಾಲ ಬಸ್ ನಿಲ್ದಾಣದಲ್ಲಿ ಈ ಘಟನೆ ವರದಿಯಾಗಿದೆ. ನಾಳೆ ಮಣ್ಣೆತ್ತಿನ ಅಮಾವಾಸ್ಯೆ ಹಿನ್ನೆಲೆಯಲ್ಲಿ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುವ ಮಹಿಳೆಯರು ತೋರಿದ ಶಕ್ತಿಗೆ ಬಸ್ವೊಂದರ ಬಾಗಿಲು ಕಳಚಿ ಹೋಗಿದೆ. ಕೆಎಸ್ ಆರ್ ಟಿಸಿ ಬಸ್ ನ ಬಾಗಿಲು ಮುರಿದು ಅದನ್ನು ನಿರ್ವಾಹಕ ಕೈಲಿ ಹಿಡಿದಿರುವ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪ್ರತಿದಿನ ಲಕ್ಷಾಂತರ ಮಹಿಳೆಯರು ಅಗತ್ಯ ದಾಖಲೆಗಳನ್ನ ತೋರಿಸಿ ಉಚಿತ ಟಿಕೆಟ್ ಪಡೆದು ಪ್ರಯಾಣಿಸುತ್ತಿದ್ದಾರೆ. ಈ ನಡುವೆ ಟಿಕೆಟ್ ಕಲೆಕ್ಷನ್ ಆಗಿಲ್ಲ ಎಂದು ಬೇಸತ್ತ ಚಾಲಕನೊಬನ್ಬ ಮಹಿಳೆಯರ ಮೇಲೆಯೇ ಬಸ್ ಹತ್ತಿಸಲು ಮುಂದಾಗಿದ್ದ ಪ್ರಸಂಗವೊಂದು ತುಮಕೂರು ಜಿಲ್ಲೆಯ ಕೊರಟಗೆರೆಯ ನಾಗೇನಹಳ್ಳಿ ಗೇಟ್ ಬಳಿ ನಡೆದಿತ್ತು.